ವಿಶ್ವ ಸಂವಿಧಾನ


ಶೂನ್ಯ:

ನಿರಾಕಾರ, ಶುರುವಿಲ್ಲದ, ಸೂಕ್ಷ್ಮ ಹಾಗೂ ಅಪಾರದ ಮಿತಿ ಇಲ್ಲದ, ನಿರಾಕರದ ಪ್ರವೃತ್ತಿಯಿಂದ ನಾಶವಿಲ್ಲದ, ಎಲ್ಲೆಲ್ಲಿಯೂ, ಎಂದೆಂದಿಗೂ ಅಂತ್ಯವಿಲ್ಲದ ಮಿತಿಯಿಲ್ಲದ ಒಮ್ಮತ.


ಶಕ್ತಿ:

ವಿಶ್ವವನ್ನು ವ್ಯಕ್ತಿಸುತ್ತಿರುವ ಎಲ್ಲ ಸೂಕ್ಷ್ಮದಿಂದ ವಿಶಿಷ್ಟ ಅದ್ಭುತಗಳೂ ಶಕ್ತಿಯ ವಿವಿಧ ರೂಪಗಳು. ಶಕ್ತಿಯೆಂಬ ಒಮ್ಮತ, ಒಮ್ಮತ ಅವ್ಯಕ್ತ ಶೂನ್ಯದೊಳಗೆ. ಒಂದೇ ಶಕ್ತಿ, ವಿವಿಧ ರೂಪಗಳಿಂದ ವಿವಿಧ ಪ್ರಪಂಚಗಳು: ಒಂದೇ ಶಕ್ತಿಯ ವಿವಿದಾಕಾರದ ಕೇಂದ್ರಗಳು.


ಶೂನ್ಯಗಳು:

ವಿಶ್ವಶಕ್ತಿಯನ್ನು ಒಳಗೊಂಡ ಹಾಗೂ ಎಲ್ಲೆಲ್ಲಿಯೂ ಕೇಂದ್ರಿತ ಅಪಾರ ಶೂನ್ಯವು, ಶಕ್ತಿಯ ವಿವಿಧ ವರ್ಣಾರ್ಥದ ಹೊಂದಾಣಿಕೆಗಳಿಂದ ಮಧ್ಯಕರಿಸಿದ ಸ್ವಕೇಂದ್ರಿತ ಮಧ್ಯಬಿಂದು ಶೂನ್ಯಗಳಿಂದ ಶಕ್ತಿಯನ್ನು ವಿವಿದಾಕಾರಗಳಲ್ಲಿ ವರ್ಣಿಸುತ್ತದೆ.


ಪ್ರಜ್ಞೆ

ನಮ್ಮ ಇಂದ್ರಿಯಗಳನ್ನು ಪ್ರಭಾವಿಸಿ ಮನಸ್ಸಿನೊಡನೆ ಜ್ಞಾನೋದಯ ಆಗುತ್ತಿರುವ ಪ್ರಜ್ಞೆ “ನಾನು” ಎಂಬ ನಮ್ಮ ಪ್ರಜ್ಞಾರ್ಥದ ಮಧ್ಯಬಿಂದುವಿನಿಂದ.


ವಿಶ್ವ


ಆದಿ ಅಂತ್ಯ ಇಲ್ಲದ ಅಪಾರ ಶೂನ್ಯವು ಅಪಾರ ಶಕ್ತಿಯನ್ನು ಮಧ್ಯಬಿಂದು ಶೂನ್ಯಗಳ ಸನ್ನಿಧಿಯಿಂದ ದೇಹಾರ್ಥವಾಗಿ ನಕ್ಷತ್ರ, ಮಾನವ ಮತ್ತಿನ್ನಿತರ ಶಕ್ತಿಯುತ ಕೇಂದ್ರಗಳಾಗಿ ವಿಶ್ವವನ್ನು ವರ್ಣಿಸುತ್ತದೆ. ಅಪಾರ ಶೂನ್ಯವು ಸೂಕ್ಷ್ಮ ಹಾಗೂ ಅಪಾರದ ಅಮಿತ ಆವರಣದಿಂದ ಎಲ್ಲೆಲ್ಲಿಯೂ, ಎಂದೆಂದಿಗೂ ಅಪಾರ ಶಕ್ತಿಯೊಡನೆ ವಿಶ್ವವನ್ನು ಅದ್ಭುತವಾಗಿ ಸುವರ್ಣಿಸುತ್ತದೆ.

ಸ್ಥಿರ ಅಥವಾ ಚಲನಾತ್ಮಕ ದೇಹಾರ್ಥಗಳಾದ ನಾವು, ನಮ್ಮ ಪ್ರಜ್ಞಾರ್ಥದ ಮಧ್ಯಬಿಂದು ಶೂನ್ಯಗಳ ಕೇಂದ್ರಿತ ಆವರಣದಿಂದ ಮಿತ ಪ್ರಜ್ಞ ಮತ್ತು ಕ್ರಿಯಾತ್ಮಕ. ಒಮ್ಮತ ಅಪಾರ ಶೂನ್ಯವು ಅಮಿತ ಆವರಣದಿಂದ ಅಪಾರ ಶಕ್ತಿಯೊಡನೆ ಅಪಾರ ಪ್ರಜ್ಞ ಹಾಗೂ ಅಮಿತ ಕ್ರಿಯಾತ್ಮಕ. ನಾಶವಿಲ್ಲದ ಪರಮಾತ್ಮನಾಗಿ ಎಲ್ಲೆಲ್ಲಿಯೂ ಎಂದೆಂದಿಗೂ ಗುಣಗಳನ್ನು ಅದ್ಬುತಿಸುವ ಗುಣಾತೀತ.

ಎಂದೆಂದಿಗೂ ಕ್ರಿಯಾತ್ಮಕ “ಸತ್”, ಎಲ್ಲೆಲ್ಲಿಯೂ ಪ್ರಜ್ಞ “ಚಿತ್”, ದಿವ್ಯ ಶಕ್ತಿಯುತ ಕ್ರಿಯಪ್ರಜ್ಞದ “ಆನಂದ”. ಸ್ವಕೇಂದ್ರಿತ ಪ್ರಜ್ಞಾಶಕ್ತಿಯನ್ನು ಗುಣಾರ್ಥಗಳಿಲ್ಲದೆ ಕೇಂದ್ರಿಸಿದೊಡನೆ, ಸ್ವಕೇಂದ್ರಿತ ಪ್ರಜ್ಞವಿಲ್ಲದೆ, ಸ್ವಪ್ರಜ್ಞಾರ್ಥದ ಮಧ್ಯಬಿಂದು ಶೂನ್ಯವ ತೊರೆದು, ಅಪಾರ ಶೂನ್ಯದ ವಿಶ್ವಾದ್ಯಂತ ಆವರಣದಿಂದ ದಿವ್ಯ ಕ್ರಿಯಪ್ರಜ್ಞತೆ ಗೆಲ್ಲುವ ಇನ್ಯಾವುದಿಲ್ಲದ ಮೌನವೇ ಧ್ಯಾನ ಯೋಗ.


ದಿವ್ಯತೆ


ಇನ್ನಾವುದೇ ಕೋಟಿಭಾಗದ ಸೂಕ್ಷ್ಮ ಅಥವ ವಿಶಿಷ್ಟಾಕರದ ಶಕ್ತಿ ಈ ಜಗತ್ತನ್ನು ಸೃಷ್ಟಿಸಿ ಅದ್ಬುತಿಸುತ್ತಿರುವಂತೆ ಸೂಚಿಸುವಂತಿದ್ದರೂ, ಅದರ ಕ್ರಿಯಕಾರವೂ ಅದರ ಮಧ್ಯಬಿಂದುವಿನಿಂದಲೇ ಆಧಾರಿತವಾಗಿದ್ದು, ಅಂತಹ ಮಧ್ಯಬಿಂದು ಶೂನ್ಯವು ಮತ್ತು ಅದರ ಆಕಾರವೋ ವಿಚಿತ್ರಾಕಾರವೋ ಅಪಾರ ಶೂನ್ಯದ ಅಮಿತ ಆವರಣದೊಳಗಿಂದಲೇ ಸೂಚಿಸಬಹುದಾದರಿಂದ, ಶೂನ್ಯವೆ ಎಲ್ಲೆಲ್ಲಿಯೂ ಎಂದೆಂದಿಗೂ ಸಾಕ್ಷಿಯಾಗಿರುವ ಶ್ರೇಷ್ಠಪ್ರಜ್ಞ ಯೇಸು, ಎಲ್ಲೆಲ್ಲಿಯೂ ಶಕ್ತಿಯುತ ಶ್ರೇಷ್ಠ ಸುಹಾನ್ ಅಲ್ಲಾಹ್, ದಿವ್ಯ ಕ್ರಿಯಪ್ರಜ್ಞ ಗುಣಗಳನ್ನು ಅದ್ಬುತಿಸುತ್ತಿರುವ ಗುಣಾತೀತ ಸತ್ ಚಿತ್ ಆನಂದ ಶಿವ.

Universal Introduction